ಬ್ಯಾಂಕಾಕ್‌ನಲ್ಲಿ ?ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
Posted date: 22/January/2011

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರಕ್ಕಾಗಿ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಎಂದು ಆರಂಭವಾಗುವ ಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಎರಡು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ. ಏಳು ದಿನಗಳ ಕಾಲ ನಡೆಯುವ ಈ ಗೀತೆಗಳ ಚಿತ್ರೀಕರಣದಲ್ಲಿ ವಿಜಯ್ ಹಾಗೂ ರಮ್ಯಾ ಭಾಗವಹಿಸಿದ್ದಾರೆ. ಕಲ್ಯಾಣ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
     ಪ್ರೀತಂಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿದೆ. ಮೈಸೂರಿನ ಬಳಿ ನಿರ್ಮಾಣವಾಗಿರುವ ಸಂಧ್ಯಾರಾಗ ಕಲಾ ದೇಗುಲ ಸ್ಟುಡಿಯೋದಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಈ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ವಿವಿಧ ಸೆಟ್‌ಗಳನ್ನು ನಿರ್ಮಿಸಿದ್ದಾರೆ.
    ಎಸ್.ಕೃಷ್ಣ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಹರ್ಷ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿಜಯ್, ರಮ್ಯಾ, ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed